Home
A BRIEF NOTE ON KRISHNARAJANAGARA TOWN
Krishnarajanagara is a town in Mysore district in Indian state of Karnataka.It was founded between 1925 and 1930 as a new town, when a flood by river Kaveri damaged the nearby old town called Yedatore. The town was shifted to a place 3 miles south and at a higher elevation, now called Krishnarajanagara. It was named after Krishnaraja Wodeyar, the maharaja of Mysore.It is also called as K.R.Nagar. It is well planned town with broad roads. It had a population of 30,603 as per census 2001. Krishnarajanagara stretches to an area of 8.04 SqKms. K.R.Nagar is well connected by rail and road to places like Mysore, Hassan, Hunsur and many other places. It is close to Krishnarajanagar about 13 Km, famous Chunchanakatte Falls is located. The town has the famous Arkeshwara Swamy temple is situated on the bank of river Kaveri and a jathra(Car festival) is celebrated on Rathasaptami day.
ಕೃಷ್ಣರಾಜನಗರದ ಕಿರು ಪರಿಚಯ
ಕೃಷ್ಣರಾಜನಗರ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಯಲ್ಲಿದೆ. ಈ ಪಟ್ಟಣವು ಸುಮಾರು 1925 ರಿಂದ 1930 ರಲ್ಲಿ ಸ್ಥಾಪನೆಯಾಯಿತು. ಕಾವೇರಿ ನದಿಯ ನೆರೆಯಿಂದಾಗಿ ಹಳೇ ಪಟ್ಟಣವಾದ ಯಡತೊರೆ ಅವನತಿ ಹೊಂದಿತು. ನಂತರ ಪಟ್ಟಣವು ಕೃಷ್ಣರಾಜನಗರ ಎಂಬ ಹೆಸರಿನೊಂದಿಗೆ 3 ಮೈಲು ದಕ್ಷಿಣ ದಿಕ್ಕಿನ ಎತ್ತರವಾದ ಸ್ಥಳದಲ್ಲಿ ಸ್ಥಾಪಿಸಲ್ಪಟ್ಟಿತು. ಈ ಹೆಸರು ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರ್ ರವರ ಹೆಸರಿನಿಂದ ಕೃಷ್ಣರಾಜನಗರ ಎಂಬ ಹೆಸರಾಯಿತು. ಪಟ್ಟಣದ ರಸ್ತೆಗಳು ಉತ್ತಮವಾಗಿವೆ. ಪಟ್ಟಣದ ಜನಸಂಖ್ಯೆ 2001ರ ಜನಗಣತಿಯ ಪ್ರಕಾರ 30603. ಪಟ್ಟಣವು 8.04 ಚ.ಕಿ.ಮೀ. ವ್ಯಾಪಿಸಿದೆ.ಮೈಸೂರು ಮತ್ತು ಹಾಸನ ನಗರಗಳ ರೈಲು ಮಾರ್ಗ ಈ ಪಟ್ಟಣದ ಮೂಲಕ ಸಾಗಿದೆ. ಪ್ರಸಿದ್ಧವಾದ ಚುಂಚನಕಟ್ಟೆ ಫಾಲ್ಸ್ ಗೆ ಕೇವಲ 13 ಕಿ.ಮೀ. ದೂರದಲ್ಲಿದೆ.ನಗರದ ಕಾವೇರಿ ನದಿ ದಂಡೆಯಲ್ಲಿ ಪ್ರಖ್ಯಾತವಾದ ಅರ್ಕೇಶ್ವರ ದೇವಸ್ಥಾನವಿದ್ದು, ಪ್ರತಿ ರಥಸಪ್ತಮಿಗೆ ಇಲ್ಲಿ ಜಾತ್ರೆ ನಡೆಯುತ್ತದೆ.
ಸಂಕ್ಷಿಪ್ತ ಟಿಪ್ಪಣಿ
ಸ್ಥಳೀಯ ಸಂಸ್ಥೆಯು ಸರ್ಕಾರದ ಒಂದು ಅಂಗ ಸಂಸ್ಥೆಯಾಗಿದ್ದು, ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ರಡಿ ಕೆಲಸ ನಿರ್ವಹಿಸುವುದಾಗಿರುತ್ತದೆ. ಸ್ಥಳೀಯ ಸಂಸ್ಥೆಯು ತನ್ನದೇ ಆದ ಒಂದು ಸಮಿತಿ (ಕೌನ್ಸಿಲ್)ಯನ್ನು ಹೊಂದಿದ್ದು. ಜನಸಂಖ್ಯೆಗೆ ಅನುಗುಣವಾಗಿ ಸದಸ್ಯರನ್ನು ಹೊಂದಿರುತ್ತದೆ. ಸ್ಥಳೀಯ ಸಂಸ್ಥೆಯು ತನ್ನ ವ್ಯಾಪ್ತಿಯಲ್ಲಿ ಕಟ್ಟಡ/ನಿವೇಶನ ತೆರಿಗೆ, ಜಾಹಿರಾತು ಶುಲ್ಕ, ಪರವಾನಗಿ ಫೀ ಇತ್ಯಾದಿ., ವಸೂಲು ಮಾಡುವ ಮೂಲಕ ತನ್ನ ಸಂಪನ್ಮೂಲವನ್ನು ರೂಡಿಸಿಕೊಂಡು ಸರ್ಕಾರವು ನೀಡುವ ಅನುದಾನವನ್ನು ಬಳಸಿಕೊಂಡು ಪಟ್ಟಣ/ನಗರ ವ್ಯಾಪ್ತಿಯಲ್ಲಿ ಬರುವ ನಾಗರೀಕರಿಗೆ ಮೂಲಬೂತ ಸೌಕರ್ಯವನ್ನು ನೀಡುವುದು ವಿವಿಧ ಅಭಿವೃದ್ದಿ ಕೆಲಸಗಳನ್ನು ಮಾಡುವುದು ತನ್ನ ಮೂಲ ಉದ್ದೇಶವಾಗಿರುತ್ತದೆ. ಸಂಸ್ಥೆಯ ನಿರ್ವಹಣೆಗೆ ಸರ್ಕಾರವು ಒಬ್ಬರು ಅಧಿಕಾರಿ ಮತ್ತು ಆಯಾಯ ಸ್ಥಳೀಯ ಸಂಸ್ಥೆಗೆ ಅನುಗುಣವಾಗಿ ಸಿಬ್ಬಂದಿಯನ್ನು ನೇಮಕಮಾಡಿರುತ್ತದೆ. ಅಧಿಕಾರಿ ಮತ್ತು ನೌಕರರು ಕೌನ್ಸಿಲ್ ಅಧಿನಕ್ಕೆ ಒಳಪಟ್ಟು ಸರ್ಕಾರವು ರಚಿಸಿರುವ ಅಧಿನಿಯಮದಡಿ ಕೆಲಸ ನಿರ್ವಹಿಸಬೇಕಾಗುತ್ತದೆ.
ಧ್ಯೆಯೋದ್ದೇಶಗಳು
ಸ್ಥಳೀಯ ಸಂಸ್ಥೆಯು ನಿರ್ಬಂಧಕ (Obligatory) ಮತ್ತು ವಿವೇಚನಾತ್ಮಕ (Discretionary) ಪ್ರಕಾರ್ಯಗಳನ್ನು ಹೊಂದಿರುತ್ತದೆ.
- ಬೀದಿ ದೀಪ, ಸ್ವಚ್ಚತೆ, ಕೊಳಾಯಿ ಮೂಲಕ ಕುಡಿಯುವ ನೀರಿನ ವಿತರಣೆ ದಿನನಿತ್ಯದ ಕಾಯಕವಾಗಿರುತ್ತವೆ.
- ರಸ್ತೆ ಅಭಿವೃದ್ದಿ ಪಡಿಸುವುದು, ಸೇತುವೆ, ಚರಂಡಿ ಮತ್ತು ಮಳೆ ನೀರಿನ ಚರಂಡಿ ನಿರ್ಮಿಸುವುದು ಉದ್ಯಾನವನ ನಿರ್ಮಾಣ ಇತ್ಯಾದಿ ಅಭಿವೃದ್ದಿ ಕಾಮಗಾರಿಗಳ ನಿರ್ವಹಣೆ.
- ಆಯಾ ದಿನವೇ ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿತರಣೆ
- ಸಾರ್ವಜನಿಕ ಕುಂದುಕೊರತೆ ನಿವಾರಣೆ ಘಟಕ ತೆರೆದಿದ್ದು, ಕುಂದು ಕೊರತೆಗಳನ್ನು ಶೀಘ್ರ ವಿಲೇವಾರಿಗೆ ಕ್ರಮಜರುಗಿಸುವುದು
ಮುಖ್ಯ ಧ್ಯೆಯೋದ್ದೇಶಗಳು
-
ಪಟ್ಟಣದ ಜನಸಂದಣಿ ಪ್ರದೇಶದಲ್ಲಿ ಹಣ್ಣು, ತರಕಾರಿ ಮಾರುಕಟ್ಟೆ ನಿರ್ಮಾಣ ಮತ್ತು ನಿರ್ವಹಣೆ
- ಖಸಾಯಿಕಾನೆ ನಿರ್ಮಾಣ ಮತ್ತು ನಿರ್ವಹಣೆ
- ಮನೆಗಳಿಗೆ ನಂಬರು ಪ್ಲೇಟ್ ಹಾಕಿಸುವುದು ಮತ್ತು ಬೀದಿ ಹೆಸರು ಮತ್ತು ಬೀದಿಯಲ್ಲಿ ಬರುವ ಮನೆಗಳ ಮಾಹಿತಿ ಲಭ್ಯವಾಗುವಂತೆ ಬೋರ್ಡ್ ಹಾಕಿಸುವುದು.
- ದಿನನಿತ್ಯ ಉತ್ಪತ್ತಿಯಾಗುವ ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸುವುದು.
- ರಸ್ತೆ ಒತ್ತುವರಿಗಳನ್ನು ತೆರವುಗೊಳಿಸುವುದು.
- ಉದ್ಯಾನವನಗಳನ್ನು ಅಭಿವೃದ್ದಿಪಡಿಸುವುದು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರು ಮತ್ತು ಇತರೆ ಜನಾಂಗದ ಬಡತನ ರೇಖೆಗಿಂತ ಕೆಳಗಿರುವವರಿಗೆ ಮೀಸಲಿರಿಸಿರುವ ಹಣದಿಂದ ತಯಾರಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವುದು. ಅಪಾಯಕಾರಿ ವೃತ್ತಿಗಳು ಮತ್ತು ಆಚರಣೆಗಳನ್ನು ನಿಯಂತ್ರಿಸುವುದು ಮತ್ತು ಉಪಶಮನಗೊಳಿಸುವುದು.
- ಅಗತ್ಯವಿರುವ ಕಡೆಗಳಲ್ಲಿ ಸಾಮೂಹಿಕ ಶೌಚಾಲಯ ಮತ್ತು ಬಸ್ ಶೆಲ್ಟರ್‌ಗಳ ನಿರ್ಮಾಣ
- ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಡೆಸುವುದು.
- ಅಪಾಯಕಾರಿ ರೋಗಗಳ ನಿಯಂತ್ರಣಕ್ಕಾಗಿ ಸಹಕರಿಸುವುದು.
- ಪುರಸಭೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಹಾಗೂ ಲಭ್ಯವಾಗುವ ಸೇವೆಗಳನ್ನು ವೆಬ್‌ಸೈಟ್‌ನಲ್ಲಿ ಅಳವಡಿಸುವುದು ಮತ್ತು ಪಾರದರ್ಶಕವಾಗಿ ಆಡಳಿತ ನಡೆಸುವುದು.
- ಸ್ಮಶಾನಗಳನ್ನು ಅಭಿವೃದ್ದಿಗೊಳಿಸುವುದು
- ಪಟ್ಟಣ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ತೆಯನ್ನು ಅನುಷ್ಟಾನಗೊಳಿಸುವುದು.
COMPUTARIZATION
We are very happy to intimate the citizens of K.R.Nagar Town that we have computerizes the collection of Birth and Death certificates from 1990 to till date under state Government K.M.R.P. computerization scheme, from now on wards citizens are requested to visit the citizen service centre at the office for registration and getting of Birth and Death certificates by paying service fee. Citizens are requested to make use of this facility.
ಗಣಕೀಕರಣದ ಬಗ್ಗೆ
ಕೆ.ಆರ್.ನಗರ ಪುರಸಭೆಯು 1990 ರಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಇನ್ನು ಮುಂದೆ ನಾಗರೀಕ ಸೇವಾ ಕೇಂದ್ರದಲ್ಲೆ ಜನನ-ಮರಣ ನೊಂದಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ,ಹಾಗೂ ಇದರ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.
This Page is maintained by : Panchalingegowda (Office Maneger) ,Contact No.: 789093765
Last Updated : 09-02-2012

